Sharing is caring!

ಸೋರಿಯಾಸಿಸ್ ಲಕ್ಷಣ, ವಿಧಗಳು ಹಾಗು ಆಯುರ್ವೇದೀಯ ಚಿಕಿತ್ಸೆ

ಇತ್ತೀಚೆಗೆ ಹೆಚ್ಚುತ್ತಿರುವ ಚರ್ಮ ರೋಗಗಳಲ್ಲಿ ಸೋರಿಯಾಸಿಸ್ ಎಂಬ ಸಮಸ್ಯೆ ಎಲ್ಲರನ್ನು ಮನೋದೈಹಿಕವಾಗಿ ನಿರಂತರ ಕಾಡುತ್ತಿದೆ.  ಈ ಚರ್ಮರೋಗವು ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲ ವಯೋಮಾನದವರಲ್ಲೂ  ಕಾಣಿಸಿಕೊಳ್ಳಬಹುದು. ಹೆಚ್ಚಾಗಿ ಸೋರಿಯಾಸಿಸ್ ಮಧ್ಯ ವಯಸ್ಸಿನವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದು  ಗಂಡು ಹಾಗು ಹೆಂಗಸರಲ್ಲಿ ಸಮಾನವಾಗಿ ಕಾಣಿಸಿಕೊಳ್ಳುತ್ತದೆ.

ವಿವಿಧ ಸೋರಿಯಾಸಿಗಳ ಗುಣ ಲಕ್ಷಣಗಳು ಬೇರೆಬೇರೆಯಾಗಿದ್ದರೂ ಸಾಮಾನ್ಯವಾಗಿ ಚರ್ಮವು ಕೆಂಪಾಗಿ ಅಥವಾ ವಿವರ್ಣತೆಯನ್ನು ಹೊಂದಿ, ದಪ್ಪಾಗಾಗಿ, ಒರಟಾಗಿ , ಕೆಲವೊಮ್ಮೆ  ಅಸಾಧ್ಯವಾದ ತುರಿಕೆಯಿಂದ ಕೂಡಿದ್ದು, ವರ್ತುಲಾಕಾರದ ಮಂಡಲಗಳನ್ನು ಹೊಂದಿರುತ್ತದೆ, ಕೆಲವೊಂದು ವಿಧವಾದ ಸೋರಿಯಾಸಿಸ್ಗಳಲ್ಲಿ ಮಂಡಲಾಕಾರದ ಗುಳ್ಳೆಗಳಿಂದ ಸ್ರಾವವೂ ಉಂಟಾಗುತ್ತದೆ. ದೇಹದ ಯಾವುದೇ ಭಾಗದಲ್ಲಿ ನಿರ್ದಿಷ್ಟ ಕೆಂಪುಕಲೆಗಳುಂಟಾಗಿ ಅವುಗಳ ಮೇಲೆ ಬಿಳಿಯ ವರ್ಣದ ಚಕ್ಕೆಗಳಾಗುತ್ತವೆ.

ಸೋರಿಯಾಸಿಸ್ಗೆ ಮುಖ್ಯ ಕಾರಣವೆಂದರೆ ಚರ್ಮದ ಒಳಪದರಗಳ ಜೀವಕೊಶಗಳು ಹೆಚ್ಚು ಹೆಚ್ಚಾಗಿ ವಿಭಜನೆಗೊಳ್ಳುವುದು. ಇವು ಕೆಳಗಿನಿಂದ ಮೇಲ್ಪದರಕ್ಕೆ ಹೊಗಲು ಸಾಮಾನ್ಯವಾಗಿ ನಾಲ್ಕರಿಂದ ಐದು ವಾರಗಳು ಬೇಕು. ಆದರೆ ಸೋರಿಯಾಸಿಸ್ನಲ್ಲಿ ಕೇವಲ ನಾಲ್ಕರಿಂದ ಆರು ದಿನಗಳಲ್ಲೇ ಇವು ಚರ್ಮದ ಮೇಲ್ಪದರಕ್ಕೆ ಬಂದು ಬಿಡುತ್ತವೆ. ಹಾಗೆ ಮೇಲೆಬಂದ ಚರ್ಮದ ಪದರಗಳು  ಚಕ್ಕೆಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ.

ಸೋರಿಯಾಸಿಸ್ ಕಾಯಿಲೆಗೆ ನಿರ್ದಿಷ್ಟವಾದ ಕಾರಣವಿನ್ನೂ ತಿಳಿದಿಲ್ಲವಾದರೂ ಇದನ್ನೊಂದು ನಮ್ಮ ದೇಹದ ಇಮ್ಯೂನ್ ಸಿಸ್ಟಂಗೆ (ಕಾಪೇರ್ಪಾಟು) ಸಂಬಂಧಿಸಿದ ತೊಂದರೆಯೆಂದು ಭಾವಿಸಲಾಗಿದೆ. ಈನ್ನೂ ನಿಖರವಾಗಿ ಹೇಳಬೇಕೆಂದರೆ ನಮ್ಮ ಬಿಳಿರಕ್ತ ಕಣಗಳಲ್ಲಿರುವ ಟಿ-ಲಿಂಫೊಸೈಟ್ ಅಥವಾ ಟಿ- ಸೆಲ್ಸ್ ದೆಹದೆಲ್ಲಡೆ ಸಾಗಿ ದೇಹದಲ್ಲಿ ಸೇರಿಕೊಂಡಿರುವ ಪರಕೀಯ ವಸ್ತುಗಳ ಪತ್ತೆ ಹಚ್ಚುವಿಕೆ ಹಾಗು ಇವುಗಳ ವಿರುದ್ದ ಹೋರಾಡುತ್ತವೆ ಉದಾಹರಣೆಗೆ ಬ್ಯಾಕ್ಟೀರಿಯ ಅಥವಾ ವೈರಸ್.

ಸೋರಿಯಾಸಿಸ್ನಲ್ಲಿ ಟಿ- ಸೆಲ್ಸ್ ತಪ್ಪಾಗಿ ಆರೊಗ್ಯವಂತ ಚರ್ಮದ ಕಣಗಳ ಮೇಲೆ ಧಾಳಿ ನಡೆಸಿ ಚರ್ಮಕೊಶಗಳ ಅನಿಯಂತ್ರಿತ ಉತ್ಪಾದನೆಗೆ ಉತ್ತೇಜಿಸುತ್ತದೆ. ಉತ್ತೇಜಿತ ಟಿ- ಸೆಲ್ಸ್ ಗಳು ದೇಹದಲ್ಲಿ ಇತರ ಮಾರ್ಪಡುಗಳಿಗೆ ಕಾರಣವಾಗಿ ಸೋರಿಯಾಸಿಸ್ ಚಕ್ಕೆಗಳ ಸುತ್ತಲಿರುವ ರಕ್ತನಾಳಗಳನ್ನು ವಿಕಸಿಸಿ ಬಿಳಿರಕ್ತ ಕಣಗಳು ಚರ್ಮದ ಮೆಲ್ಪದರಕ್ಕೆ ಸಾಗಲು ಅನುವುಮಾಡಿ ಕೊಡುತ್ತದೆ. ಈ ಪರಿವರ್ತನೆಯು ಅತಿಯಾದ ಆರೊಗ್ಯವಂತ ಚರ್ಮದ ಕಣಗಳು, ಟಿ- ಸೆಲ್ಸ್ ಹಾಗು ಬಿಳಿ ರಕ್ತಕಣಗಳ ಉತ್ಪಾದನೆಗೆ ಪ್ರಚೊದಿಸುತ್ತವೆ. ಈ ನಿರಂತರ ಪ್ರಕ್ರಿಯೆಯು ಕೆಳ ಪದರದಲ್ಲಿರುವ ಚರ್ಮಕಣಗಳನ್ನು ಮೆಲ್ಪದರಕ್ಕೆ ವಾರಗಳ ಬದಲು ದಿನಗಳಳ್ಳಿ ತಳ್ಳಿ ಚರ್ಮದ ಮೆಲ್ಪದರಗಳಲ್ಲಿ ಶೇಖರಣೆಗೊಂಡು ಉದುರಿ ಹೊಗದೆ ಚಕ್ಕೆಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ.

Plaque Psoriasis Images

ಸೋರಿಯಾಸಿಸ್ಗೆ ಕಾರಣಗಳು:

  • ವಿರೋಧ ಗುಣಗಳ ಆಹಾರ ಸೇವನೆ.
  • ಮಾಂಸ, ಮೀನು, ಮೆಣಸು, ಮೊಸರು ಇತ್ಯಾದಿ ಉಷ್ಣ ಸ್ವಭಾವದ ಕಫಪಿತ್ತಗಳನ್ನು ಹೆಚ್ಚಿಸುವ ಆಹಾರದ ಅಧಿಕ ಸೇವನೆ
  • ಮದ್ಯಪಾನದೊಂದಿಗೆ ಕರಿದ ತಿಂಡಿ ಅಥವಾ ಮಾಂಸ ಸೇವನೆ
  • ಮಾಂಸ, ಮೀನಿನೊಂದಿಗೆ ಹಾಲು ಹಾಗು ಹಾಲಿನ ಪದಾರ್ಥಗಳ ಸೇವನೆ
  • ತೀವ್ರ ಚಿಂತೆ, ಹಗಲು ನಿದ್ರೆ, ಹುಳಿ ಹಣ್ಣುಗಳ ಸೇವನೆ
  • ಮನಸ್ಸಿನಲ್ಲಿ ಪಾಪಪ್ರಜ್ಣೆ ಜೊತೆಗೆ ಹಾಲು+ಮೊಸರು, ಹಾಲು+ಮಜ್ಜಿಗೆಯಂತಹ ವಿರುದ್ದಾಹಾರಗಳ ಒಟ್ಟಿಗೆ ಸೇವನೆ ಇತ್ಯಾದಿ… ಕಾರಣಗಳಿಂದ ರಕ್ತ ಕೆಟ್ಟು ಸೋರಿಯಾಸಿಸ್ ರೋಗ ಉಂಟಾಗಬಹುದು.

ಸೋರಿಯಾಸಿಸ್ ಪ್ರಭೇದಗಳು :

ಸಾಮಾನ್ಯವಾಗಿ ಸೋರಿಯಾಸಿಸ್ ಕಲೆಗಳು ನಿರ್ದಿಷ್ಠ  ಅಂಚುಗಳನ್ನು ಪಡೆದಿರುತ್ತದೆ. ಇವು ಕೆಂಪಗಿದ್ದು, ಒಣಗಿದ ಬಿಳಿ ಬಣ್ಣದ ಚಕ್ಕೆಗಳಿಂದ ಆವರಣಗೊಂಡಿರುತ್ತವೆ. ಇವುಗಳ ಸ್ವರೂಪ ಹಾಗು ಗುಣಲಕ್ಷಣಗಳಿಗೆ ಅನುಗುಣವಾಗಿ ಹಲವಾರು ಪ್ರಭೇದಗಳಾಗಿ ವಿಂಗಡಿಸಿದ್ದಾರೆ. ಇವುಗಳಲ್ಲಿ ಮುಖ್ಯವಾಗಿ ಪ್ಲೇಕ್ ಸೋರಿಯಾಸಿಸ್, ಉಗುರಿನ ಸೋರಿಯಾಸಿಸ್, ಗಟ್ಟೇಟ್ ಸೋರಿಯಾಸಿಸ್, ತಲೆಯ ಸೋರಿಯಾಸಿಸ್,ಇನ್ವರ್ಸ್ ಸೋರಿಯಾಸಿಸ್, ಪಸ್ಟುಲಾರ್ ಸೋರಿಯಾಸಿಸ್ ಹಾಗು ಎರಿಥ್ರೊಡರ್ಮಿಕ್ ಸೋರಿಯಾಸಿಸ್.

ಸೋರಿಯಾಸಿಸ್ನನ್ನು ಹೆಚ್ಚಿಸುವ ಉತ್ತೇಜಕಗಳು:

  • ಮಾನಸಿಕ ಒತ್ತಡ
  • ಅಲರ್ಜಿಗಳು
  • ಮದ್ಯದ ಸೇವನೆ
  • ತಣ್ಣಗಿನ ಅಥವಾ ಚಳಿಯ ವಾತಾವರಣ.
  • ಒಣ ಹವೆ
  • ಹಚ್ಚೆ ಹಾಕಿಸಿಕೊಳ್ಳುವಿಕೆ
  • ಔಷದಗಳು
  • ಸೋಂಕು
  • ಗಾಯಗಳು
  • ಧೂಮಪಾನ
  • ಹಾರ್ಮೋನ್ಗಳು

ಆಯುರ್ವೆದದಲ್ಲಿ ಸೋರಿಯಾಸಿಸ್ಗೆ ಚಿಕಿತ್ಸೆ ಇದೆ ಚಿಂತಿಸದಿರಿ

ಆಯುರ್ವೆದದಲ್ಲಿ ಈ ತೊಂದರೆಗೆ ಪರಿಹಾರವಿದೆ. ಸಮಸ್ಯೆಯ ಮೂಲಕಾರಣ ಹುಡುಕಿ, ರೋಗದ ಗುಣಲಕ್ಷಣಗಳನ್ನು ಹಾಗೂ ವ್ಯಕ್ತಿಯ ಆಹಾರ ಪದ್ದತಿ ಹಾಗೂ ಜೀವನ ಶೈಲಿ ತಿಳಿದು ಚಿಕಿತ್ಸೆ ನೀಡಲಾಗುತ್ತದೆ.

ಆಯುರ್ವೇದದಲ್ಲಿ ದೇಹದಲ್ಲಿ ಹೆಚ್ಚಿರುವ ದೋಷಗಳನ್ನು ಪಂಚಕರ್ಮ ಚಿಕಿತ್ಸೆ ಮುಖಾಂತರ ಹೊರ ಹಾಕಿ, ಔಷಧಿ ಸೇರಿದಂತೆ ಆಹಾರ ಮತ್ತು ದಿನಚರ್ಯದಲ್ಲಿನ ಸೂಕ್ತ ಬದಲಾವಣೆಯ ಮೂಲಕ ಚಿಕಿತ್ಸೆ ನೀಡಲಾಗುತ್ತದೆ.

ಸೋರಿಯಾಸಿಸ್ನಲ್ಲಿ ರೋಗಿಯು ತಾಳ್ಮೆಯಿಂದ ಚಿಕಿತ್ಸಾ ವಿಧಾನಗಳನ್ನು ಪಾಲಿಸಿದಲ್ಲಿ ಪರಿಹಾರ ಸಾಧ್ಯ.

ಸೋರಿಯಾಸಿಸ್ ಚಿಕಿತ್ಸೆ psoriasis chikitse

ಕೆಲವೊಂದು ತಪ್ಪು ಕಲ್ಪನೆಗಳು :

  • ಸೋರಿಯಾಸಿಸ್ ಅಂಟುರೋಗವಲ್ಲ. ಇದೊಂದು ದೇಹದ ಇಮ್ಯೂನ್ ಸಿಸ್ಟಂಗೆ ಸಂಬಂಧಿಸಿದ ತೊಂದರೆಯೆಂದು ಭಾವಿಸಲಾಗಿದೆ.
  • ಸೋರಿಯಾಸಿಸ್ ಕಾಣಿಸಿಕೊಳ್ಳಲು ಕೇವಲ ದೇಹ ಸ್ವಚ್ಚತೆಯ ಬಗ್ಗೆ ಅಸಡ್ಡೆ ಕಾರಣವಲ್ಲ.
  • ಸೋರಿಯಾಸಿಸ್ ಕೇವಲ ಚರ್ಮದ ತೊಂದರೆಯಾಗಿರದೆ ದೀರ್ಘಕಾಲ ನಿರಂತರ ಕಾಡುವ ಇಮ್ಯೂನ್ ಸಿಸ್ಟಂಗೆ ಸಂಬಂಧಿಸಿದ ತೊಂದರೆ.
  • ಸೋರಿಯಾಸಿಸ್ ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದಿಲ್ಲ.
  • ಸೂಕ್ತ ಸಮಯದಲ್ಲಿ ಚಿಕಿತ್ಸೆಯನ್ನು ತೆಗೆದುಕೊಳ್ಳದಲ್ಲಿ ಇದು  ದೇಹದ ಎಲ್ಲಾ ಭಾಗಗಳಿಗೂ ಹರಡಬಹುದು.
  • ಇದು ಒಮ್ಮೆ ವಾಸಿಯಾದಂತೆ ಕಂಡುಬಂದರೂ ಪದೇ ಪದೇ ಕಾಡುವ ಕಾಯಿಲೆ.
  • ಸೋರಿಯಾಸಿಸ್ ಕೇವಲ ಕಾಸ್ಮೆಟಿಕ್ ಸಮಸ್ಯೆಯಾಗಿದೆ
  • ಸೋರಿಯಾಸಿಸ್ ಕೇವಲ ದೈಹಿಕ ಸಮಸ್ಯೆಯಾಗಿದೆ
  • ಸೋರಿಯಾಸಿಸ್ಗೆ ಒಂದು ಬಾರಿ ಚಿಕಿತ್ಸೆ ಮಾಡುವುದರಿಂದ ವಾಸಿಮಾಡಬಹುದು
  • ಸೋರಿಯಾಸಿಸ್ ಚಿಕಿತ್ಸೆ ನೀಡಲಾಗುವುದಿಲ್ಲ.
  • ಎಲ್ಲಾ ಸೋರಿಯಾಸಿಸ್ ಒಂದೇ.
  • ಸೋರಿಯಾಸಿಸ್ ಇತರ ದೈಹಿಕ ವೈದ್ಯಕೀಯ ಪರಿಸ್ಥಿತಿಗಳೊಂದಿಗೆ ಸಂಬಂಧ ಹೊಂದಿಲ್ಲ.
  • ಸೋರಿಯಾಸಿಸ್ ಒಂದು ವಯಸ್ಕ ರೋಗ.

ಸೋರಿಯಾಸಿಸ್ಗೆ ಆಯುರ್ವೇದ ಚಿಕಿತ್ಸೆಯ ಪ್ರಯೋಜನಗಳು

ಸೋರಿಯಾಸಿಸ್ಗಾಗಿ ಆಯುರ್ವೇದ ಚಿಕಿತ್ಸೆಯು ರೋಗಗಳ ಮೂಲ ಕಾರಣವನ್ನು ಗುಣಪಡಿಸುವ ಗುರಿಯನ್ನು ಹೊಂದಿದೆ. ಇದರಲ್ಲಿ ಮುಖ್ಯವಾಗಿ ರೋಗದ ಕಾರಣಗಳನ್ನು ಪತ್ತೆ ಹಚ್ಚಿ ಅವುಗಳನ್ನು ತಡೆಯುವುದು.  ಆಹಾರದ ತಿದ್ದುಪಡಿ, ಜೀವನಶೈಲಿಯನ್ನು ಮಾರ್ಪಡಿಸುವುದು ಮುಂತಾದವು ಸೋರಿಯಾಸಿಸ್ನಲ್ಲಿ ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.

ಇತರೆ ಪ್ರಯೋಜನಗಳು

  • ಆಯುರ್ವೇದ ಚಿಕಿತ್ಸೆಗಳು ಹಾನಿಕಾರಕ ರಾಸಾಯನಿಕಗಳಿಂದ ಮುಕ್ತವಾಗಿದೆ.
  • ಸೋರಿಯಾಸಿಸ್ನ ಮೂಲ ಕಾರಣಕ್ಕಾಗಿ ಚಿಕಿತ್ಸೆಯೇ ಹೊರತು ಕೇವಲ ರೋಗಲಕ್ಷಣದ ಚಿಕಿತ್ಸೆಯಲ್ಲ.
  • ರೋಗದ ಹರಡುವಿಕೆ ಹಾಗು ಸೋರಿಯಾಸಿಸ್ನಿಂದ ಉಂಟಾಗುವ ಇತರೆ ತೊಂದರೆಗಳಾದ ಸೋರಿಯಾಸಿಸ್ ಆರ್ಥ್ರೈಟಿಸ್ಗಳನ್ನೂ    ತಡೆಯುತ್ತದೆ.
  • ಆರೋಗ್ಯಕರ ಜೀವನಕ್ಕಾಗಿ ಸೂಕ್ತವಾದ ಆಹಾರವನ್ನು ಆರಿಸಿಕೊಳ್ಳುವುದು.
  • ರೋಗದ ನಿರ್ಮೂಲನೆ ಹಾಗು ರೋಗದ ತಡೆಗಟ್ಟುವಿಕೆಗೆ ಸಹಕಾರಿಯಾಗುವಂತ ಜೀವನಶೈಲಿ.
  • ನಮ್ಮ ಒಟ್ಟಾರೆ ಆರೋಗ್ಯದ ಸುಧಾರಣೆ.
  •  ದೇಹದಲ್ಲಿ ನೈಸರ್ಗಿಕವಾದ ರೋಗನಿರೋಧಕ ಶಕ್ತಿಯ ಹೆಚ್ಚಳ.
  • ದೇಹದ ಸಮತೋಲನ ಕಾಪಾಡುವಿಕೆ.
  • ಪ್ರಕೃತಿದತ್ತವಾದ ಔಷದಗಳು.

ಸೋರಿಯಾಯಸಿಸ್ನಲ್ಲಿ ತಿನ್ನಬಾರದ ಆಹಾರಗಳು 

ಈ ಕೆಳಗಿನ ಆಹಾರಗಳನ್ನು ಚರ್ಮರೋಗದಲ್ಲಿ ವರ್ಜಿಸಬೇಕು.

  • ಹುಳಿ ಪದಾರ್ಥಗಳು
  • ಉಪ್ಪು
  • ಕಟು ರಸಯುಕ್ತ ಆಹಾರ
  • ಮೊಸರು
  • ಹಾಲು
  • ಬೆಲ್ಲ
  • ಜವುಗು ಭೂಮಿಯಲ್ಲಿರುವ ಪ್ರಾಣಿಗಳ ಮಾಂಸ
  • ಎಳ್ಳು
  • ಉದ್ದಿನ ಆಹಾರ ಪದಾರ್ಥಗಳು

ಸೋರಿಯಾಸಿಸ್ ಜೊತೆಗೆ ಚೆನ್ನಾಗಿ ಬದುಕಲು ಸಲಹೆಗಳು

  • ಆರೋಗ್ಯಕರ ಆಹಾರ ಮತ್ತು ಜೀವನಶೈಲಿಯನ್ನು ಅನುಸರಿಸಿ
  • ನಿಮ್ಮ ತ್ವಚೆಯ ಆರೋಗ್ಯವನ್ನು ಕಾಪಾಡಿ.
  • ಮುಂಜಾವಿನ ಅಥವಾ ಸಂಜೆಯ ಸೂರ್ಯನ ಬೆಳಕಿಗೆ ನಿಮ್ಮನ್ನು ತೆರೆದುಕೊಳ್ಳಿ.
  • ಚರ್ಮವನ್ನು ಕೆರೆಯದಿರಿ ಹಾಗು ತುರಿಸಿಕೊಳ್ಳಬೇಡಿ.
  • ಸೋರಿಯಾಸಿಸ್ನ ಉತ್ತೇಜಕಗಳನ್ನು ಗುರುತಿಸಿ ಅದನ್ನು  ತಡೆಗಟ್ಟಿ.
  • ಮದ್ಯವನ್ನು ಸೇವಿಸುವುದನ್ನು ನಿಲ್ಲಿಸಿ.
  • ಧೂಮಪಾನ ನಿಲ್ಲಿಸಿ
  • ಒತ್ತಡ ಮುಕ್ತ ಜೀವನ ನಡೆಸಲು ಪ್ರಾರಂಭಿಸಿ.
  • ಸರಿಯಾದ ಕೆಲಸದ ಸ್ಥಳವನ್ನು ಆಯ್ಕೆಮಾಡಿ ಉದಾಹರಣೆಗೆ ಏರ್ ಕಂಡೀಶನ್ ರೂಮಿನಲ್ಲಿ ಕೆಲಸ.
  • ಒಳ್ಳೆಯ ನಿದ್ರೆಯು ಸೋರಿಯಾಸಿಸ್ನಲ್ಲಿ ಸಹಕಾರಿ.
  • ದಿನವೂ ವ್ಯಾಯಾಮ ಮಾಡುವುದು ಉತ್ತಮ.
  • ಒತ್ತಡನಿವಾರಕ ಉಸಿರಾಟದ ವ್ಯಾಯಾಮಗಳು ಧೀರ್ಘ ಕಾಲದಲ್ಲಿ ಮಾನಸಿಕ ಒತ್ತಡದಿಂದ ಉಂಟಾಗುವ ಸೋರಿಯಾಸಿಸ್ ಹೆಚ್ಚಳವನ್ನು ತಡೆಯಬಲ್ಲದು.

ಸೋರಿಯಾಸಿಸ್ಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆಯನ್ನು ಪಡೆಯದಲ್ಲಿ ಏನಾಗಬಹುದು ?

ಸೋರಿಯಾಸಿಸ್ ಒಂದು ಆಟೋ ಇಮ್ಯೂನ್ ತೊಂದರೆಯಾಗಿದ್ದು ಸೂಕ್ತ ಸಮಯದಲ್ಲಿ ಚಿಕಿತ್ಸೆ ತೆಗೆದುಕೊಳ್ಳದಲ್ಲಿ ಸೋರಿಯಾಸಿಸ್ ಸಂಪೂರ್ಣ ದೇಹವನ್ನು ಆವರಿಸಿಕೊಳ್ಳಬಹುದು. ಇದಲ್ಲದೆ ಸೋರಿಯಾಸಿಸ್ನ ಮುಂದುವರಿದ ಭಾಗವಾಗಿ ಉಗುರುಗಳ ಹಾಳಾಗುವಿಕೆ (nail psoriasis), ಸೋರಿಯಾಸಿಸ್ ಸಂಧಿವಾತ (psoriatic arthritis) ನಂತಹ ತೊಂದರೆಗಳು ಕಾಣಿಸಿಕೊಳ್ಳಬಹುದು. ಇದಲ್ಲದೆ ಸೋರಿಯಾಸಿಸ್ನಿಂದ ಪ್ರಮೇಹ (diabetes), ಹೃದಯ ಸಂಬಂಧಿಸಿದ ತೊಂದರೆಗಳು, ಯಕೃತ್ ತೊಂದರೆಗಳು (liver disease) ಮುಂತಾದ ತೊಂದರೆಗಳಿಗೆ ಕಾರಣವಾಗಬಲ್ಲುದು. ಆದ್ದರಿಂದ ಆರಂಭದ ಹಂತದಲ್ಲೇ ಚಿಕಿತ್ಸೆಯನ್ನು ಪ್ರಾರಂಭಿಸಿದರೆ ಸೋರಿಯಾಸಿಸ್ ಮತ್ತು ಸೋರಿಯಾಸಿಸ್ನಿಂದ ಉಂಟಾಗುವ ಇತರೆ ತೊಂದರೆಗಳನ್ನು ತಡೆಗಟ್ಟಬಹುದು.

ಸೋರಿಯಾಸಿಸ್ ಚಿಕಿತ್ಸೆಗಾಗಿ ಹಾಗು ಇನ್ನಿತರ ಮಾಹಿತಿಗಾಗಿ ಇಂದೇ ಕರೆಮಾಡಿ 9945850945

Sharing is caring!